ಮುಕ್ತವಾಗಿ ಮಾತನಾಡಿ

ವಿಭಿನ್ನ ಸಂದೇಶ ಕಳುಹಿಸುವ ಅನುಭವಕ್ಕಾಗಿ "ಹಲೋ" ಎಂದು ಹೇಳಿ. ನೀವು ನಿರೀಕ್ಷಿಸುವ ಎಲ್ಲಾ ವೈಶಿಷ್ಟ್ಯಗಳೊಂದಿಗೆ ಸಂಯೋಜಿಸಲ್ಪಟ್ಟ ಗೌಪ್ಯತೆಯ ಮೇಲೆ ವಿಶೇಷ ಗಮನ.


"ನಾನು ಪ್ರತಿದಿನ Signal ಬಳಸುತ್ತೇನೆ."

Edward Snowden
ಮಾಹಿತಿದಾರ ಮತ್ತು ಖಾಸಗಿತನದ ಪ್ರತಿಪಾದಕ

"I trust Signal because it’s well built, but more importantly, because of how it’s built: open source, peer reviewed, and funded entirely by grants and donations. A refreshing model for how critical services should be built."

Jack Dorsey
CEO of Twitter and Square

"Signal ನಮ್ಮಲ್ಲಿರುವ ಹೆಚ್ಚು ಸ್ಕೇಲೆಬಲ್ ಎನ್‌ಕ್ರಿಪ್ಶನ್ ಸಾಧನವಾಗಿದೆ. ಇದು ಉಚಿತ ಮತ್ತು ಸಹೋದ್ಯೋಗಿಗಳಿಂದ ಪರಿಶೀಲಿಸಲಾಗಿದೆ. ಇದನ್ನು ಜನರು ಪ್ರತಿದಿನ ಬಳಸಲು ನಾನು ಪ್ರೋತ್ಸಾಹಿಸುತ್ತೇನೆ."

Laura Poitras
ಆಸ್ಕರ್ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಮತ್ತು ಪತ್ರಕರ್ತ

"ಈ ಅಪ್ಲಿಕೇಶನ್‌ನ ಸುರಕ್ಷತೆ ಮತ್ತು ಉಪಯುಕ್ತತೆ ಎರಡರಲ್ಲೂ ಇರುವ ಚಿಂತನೆ ಮತ್ತು ಕಾಳಜಿಯಿಂದ ನಾನು ಎಂದಿಗೂ ಪ್ರಭಾವಿತನಾಗಿದ್ದೇನೆ. ಎನ್‌ಕ್ರಿಪ್ಟ್ ಮಾಡಿದ ಸಂಭಾಷಣೆಗೆ ಇದು ನನ್ನ ಮೊದಲ ಆಯ್ಕೆಯಾಗಿದೆ."

Bruce Schneier
ಅಂತರರಾಷ್ಟ್ರೀಯ ಮಟ್ಟದ ಪ್ರಸಿದ್ಧ ಭದ್ರತಾ ತಂತ್ರಜ್ಞ

Signal ಅನ್ನು ಏಕೆ ಬಳಸಬೇಕು?

Signal ಸರಳ, ಶಕ್ತಿಯುತ ಮತ್ತು ಸುರಕ್ಷಿತ ಮೆಸೆಂಜರ್ ಏಕೆಂದು ನೋಡಲು ಕೆಳಗೆ ಅನ್ವೇಷಿಸಿ

ಅಭದ್ರತೆ ಇಲ್ಲದೆ ಹಂಚಿಕೊಳ್ಳಿ

ಅತ್ಯಾಧುನಿಕ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ (ಓಪನ್ ಸೋರ್ಸ್ Signal ಪ್ರೊಟೊಕಾಲ್‌ನಿಂದ ನಡೆಸಲ್ಪಡುತ್ತದೆ) ನಿಮ್ಮ ಸಂಭಾಷಣೆಗಳನ್ನು ಸುರಕ್ಷಿತವಾಗಿರಿಸುತ್ತದೆ. ನಿಮ್ಮ ಸಂದೇಶಗಳನ್ನು ಓದಲು ಅಥವಾ ನಿಮ್ಮ ಕರೆಗಳನ್ನು ಆಲಿಸಲು ನಮಗೆ ಸಾಧ್ಯವಿಲ್ಲ, ಮತ್ತು ಬೇರೆ ಯಾರಿಗೂ ಸಾಧ್ಯವಿಲ್ಲ. ಗೌಪ್ಯತೆ ಐಚ್ಚಿಕ ವಿಷಯವಲ್ಲ — ಇದು Signal ಕಾರ್ಯನಿರ್ವಹಿಸುವ ವಿಧಾನವಾಗಿದೆ. ಪ್ರತಿ ಸಂದೇಶ, ಪ್ರತಿ ಕರೆ, ಪ್ರತಿ ಬಾರಿ.

ಏನಾದರೂ ಹೇಳಿ

ಪಠ್ಯ, ಧ್ವನಿ ಸಂದೇಶಗಳು, ಫೋಟೋಗಳು, ವೀಡಿಯೊಗಳು, GIF‌ಗಳು ಮತ್ತು ಫೈಲ್‌ಗಳನ್ನು ಉಚಿತವಾಗಿ ಹಂಚಿಕೊಳ್ಳಿ. Signal ನಿಮ್ಮ ಫೋನ್‌ನ ಡೇಟಾ ಸಂಪರ್ಕವನ್ನು ಬಳಸುತ್ತದೆ ಆದ್ದರಿಂದ ನೀವು SMS ಮತ್ತು MMS ಶುಲ್ಕವನ್ನು ತಪ್ಪಿಸಬಹುದು.

ಮುಕ್ತವಾಗಿ ಮಾತನಾಡಿ

ದೂರವನ್ನು ಆಧರಿಸಿದ ಯಾವುದೇ ಶುಲ್ಕವಿಲ್ಲದೆ, ಪಟ್ಟಣಗಳಲ್ಲಿ ಅಥವಾ ಸಾಗರದಾಚೆಯಲ್ಲಿ ವಾಸಿಸುವ ಜನರಿಗೆ ಅತ್ಯಂತ-ಸ್ಪಷ್ಟ ಧ್ವನಿ ಮತ್ತು ವೀಡಿಯೊ ಕರೆಗಳನ್ನು ಮಾಡಿ.

ಗೌಪ್ಯತೆಯನ್ನು ಅಂಟಿಸಿ

ಎನ್‌ಕ್ರಿಪ್ಟ್ ಮಾಡಿದ ಸ್ಟಿಕ್ಕರ್‌ಗಳೊಂದಿಗೆ ನಿಮ್ಮ ಸಂವಾದಗಳಿಗೆ ಅಭಿವ್ಯಕ್ತಿಯ ಹೊಸ ಪದರವನ್ನು ಸೇರಿಸಿ. ನಿಮ್ಮ ಸ್ವಂತ ಸ್ಟಿಕ್ಕರ್ ಪ್ಯಾಕ್‌ಗಳನ್ನು ಸಹ ನೀವು ರಚಿಸಬಹುದು ಮತ್ತು ಹಂಚಿಕೊಳ್ಳಬಹುದು.

ಗುಂಪುಗಳೊಂದಿಗೆ ಒಟ್ಟಿಗೆ ಕೂಡಿ

ಗುಂಪು ಚಾಟ್‌ಗಳು ನಿಮ್ಮ ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ ಸಂಪರ್ಕದಲ್ಲಿರಲು ಸುಲಭವಾಗಿಸುತ್ತದೆ.

ಜಾಹೀರಾತುಗಳಿಲ್ಲ. ಟ್ರ್ಯಾಕರ್‌ಗಳಿಲ್ಲ. ವಂಚನೆಗಳಿಲ್ಲ.

Signalನಲ್ಲಿ ಯಾವುದೇ ಜಾಹೀರಾತುಗಳಿಲ್ಲ, ಅಂಗಸಂಸ್ಥೆ ಮಾರಾಟಗಾರರು ಇಲ್ಲ, ಮತ್ತು ಭಯಾನಕ ಟ್ರ್ಯಾಕಿಂಗ್ ಇಲ್ಲ. ಆದ್ದರಿಂದ ನಿಮಗೆ ಮುಖ್ಯವಾದ ವ್ಯಕ್ತಿಗಳೊಂದಿಗೆ ಮುಖ್ಯವಾದ ಕ್ಷಣಗಳನ್ನು ಹಂಚಿಕೊಳ್ಳುವತ್ತ ಗಮನ ಹರಿಸಿ.

ಎಲ್ಲರಿಗೂ ಉಚಿತ

Signal ಎಂಬುದು ಒಂದು ಸ್ವತಂತ್ರ ಲಾಭರಹಿತ ವೇದಿಕೆಯಾಗಿದೆ. ನಾವು ಯಾವುದೇ ಪ್ರಮುಖ ಟೆಕ್ ಕಂಪನಿಗಳೊಂದಿಗೆ ಸಂಬಂಧ ಹೊಂದಿಲ್ಲ, ಮತ್ತು ನಮ್ಮನ್ನು ಎಂದಿಗೂ ಸ್ವಾಧೀನಪಡಿಸಿಕೊಳ್ಳಲಾಗುವುದಿಲ್ಲ. ನಿಮ್ಮಂತಹ ಜನರಿಂದ ಬರುವ ಅನುದಾನ ಮತ್ತು ದೇಣಿಗೆಗಳಿಂದ ಅಭಿವೃದ್ಧಿಯು ಬೆಂಬಲಿತವಾಗಿದೆ.